ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

November 1, 2010 at 9:20 AM (ಸದಾ ಕವಿಯಾದಾಗ?)

ಎಲ್ಲರಿಗು ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.

ಒಂದು ಪುಟ್ಟ ಕವನ ಬರೆಯುವದರೊಂದಿಗೆ , ಇವತ್ತಿನ ಈ ಸಂತೋಷವನ್ನು ನಿಮ್ಮೆಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಮೊದಲಿಗೆ ನಾವೆಲ್ಲರೂ ಕನ್ನಡ ಮಾತೆಯನ್ನು ನೆನೆಯುವಾ.

ಕನ್ನಡಾಂಬೆ

ಕನ್ನಡಾಂಬೆ

ನೆನೆಯುತಲಿರಿ ಸಿರಿಗನ್ನಡಂ ಗೆಲ್ಗೆ,
ಬಳಸುತಲಿರಿ ಸಿರಿಗನ್ನಡಂ ಬಾಳ್ಗೆ ,
ಮರೆಯದಿರಿ ಕನ್ನಡವ ಎರೆಯದಿರಿ ಆಂಗ್ಲವ,

ಮನದಾಳದಿ ಮೂಡಲಿ ಕನ್ನಡ ಕಸ್ತೂರಿ ,
ನೀವಾಡುವ ನುಡಿಯಾಗಲಿ ಕನ್ನಡ ಕನ್ನಡ
ಮರೆಯದಿರಿ ಕನ್ನಡವ  ಎರೆಯದಿರಿ ಆಂಗ್ಲವ,

ನಿಮ್ಮುಸಿರಲಿ ಬೆರೆಯಲಿ ಕನ್ನಡ ,
ನಿಮ್ಮ ರಕ್ತನಾಳದೊಳ ಹರಿಯಲಿ ಕನ್ನಡ ,
ಮರೆಯದಿರಿ ಕನ್ನಡವ ಎರೆಯದಿರಿ ಆಂಗ್ಲವ,

ಹೃದಯನಾಡಿಗಳು ಬಡಿಯಲಿ ಕನ್ನಡ ,
ಮಿದಿಳು ಕೋಶದೊಳು ತುಂಬಲಿ ಕನ್ನಡ ,
ಮರೆಯದಿರಿ ಕನ್ನಡವ ಎರೆಯದಿರು ಆಂಗ್ಲವ.

ಅನುಭವಿಸುತಲಿರಿ ಕನ್ನಡದ ಕಂಪು ,
ಅರ್ಥೈಸಿಕೊಳ್ಳಿ ಈ ಕಾವ್ಯದ ಇಂಪು ,
ಮರೆಯದಿರಿ ಕನ್ನಡವ ಎರೆಯದಿರಿ ಆಂಗ್ಲವ.

Advertisements

Permalink 2 Comments