ಮಳೆಯಲಿ ಜೊತೆಯಲಿ

July 8, 2010 at 9:04 PM (ಸದಾ ಕವಿಯಾದಾಗ?, Non Technical)

ಬಹಳ ದಿನಗಳಾದ ಮೇಲೆ ನಮ್ಮೂರಿಗೆ ಹೋಗ್ತಾ ಇದ್ದೆ , ಉಡುಪಿ ಬಿಟ್ಟ ತಕ್ಷಣ ನೇ ನನ್ನಾ MP3 Player ನಲ್ಲಿ songs ಕೇಳ್ತಾ ಕುಂತೆ . ಕುಂದಾಪುರ ಬಂತು ಅಲ್ಲಿ ಸ್ವಲ್ಪ ಹೊತ್ತು ಬಸ್ ನಿಲ್ಲುತ್ತೆ , ಪ್ರತಿಸಲ ನಾನು ಅಲ್ಲಿ ಸ್ವಲ್ಪ ಹೊತ್ತು ಹೊರಗಡೆ ತಿರುಗಾಡ್ತಿದ್ದೆ , ಆದ್ರೆ ಈ ಸಲ ನನ್ನ ಹತ್ತಿರ laptop ಇತ್ತು ಅದಕೆ ಕೆಳಗೆ ಇಳೀಲಿಲ್ಲ, ಅದು ತುಂಬಾ cool time, ಹೊರಗಡೆ ಸಣ್ಣಗೆ ಮಳೆ , ಅದನ್ನ ನೋಡ್ತಾ ಅಲ್ಲೇ ಕುಂತೆ . ಅಷ್ಟರಲ್ಲಿ ನಮ್ಮ ಬಸ್ ಪಕ್ಕ ಒಂದು ಕಾರ್ ನಲ್ಲಿ ಎರಡು ಕೈ ಗಳು ಹೊರಗಡೆ ಮಳೆ ನೀರಿನೊಂದಿಗೆ ಆಟವಾಡೋದನ್ನ ನೋಡಿದೆ , ಏನೋ ಸ್ವಲ್ಪ ಖುಷಿ ಆಯ್ತು , ಅದು ಒಂದು ಹುಡುಗಿ , ಮಳೆ ನೀರಿನೊಂದಿಗೆ ಬಹಳ ಖುಷಿ ಇಂದ ಆಡ್ತಾ ಇದ್ದಳು. ನನಗೆ ಅದನ್ನ ನೋಡೋಕೆ ಮಜಾ , ನೋಡ್ತಾ ನೋಡ್ತಾ , ಅವಳ ಮುಖ ನೋಡ್ಬೇಕು ಅಂತ ಅನ್ನಿಸ್ತು, ಸರಿ ಸ್ವಲ್ಪ ಹಿಂದೆ ಹೋಗಿ ಕುಂತೆ . She was very cute . She was enjoying the Rain .

ಅವಳನ್ನ ನೋಡ್ತಾ ನೋಡ್ತಾ , ನನ್ನ ಮನಸ್ಸು ತಡಿಲಿಲ್ಲ , ಕವನ ಬರಿ ಬೇಕು ಅಂತ ಅನ್ನಿಸ್ತು , mobile ನಲ್ಲೆ save ಮಾಡ್ತಾ ಹೋದೆ . ಎಲ್ಲ ಪದಗಳನ್ನ ನನ್ನ Mobile Draft ನಲ್ಲಿ ಸೇವ್ ಮಾಡಿದೆ, ಅವಳ ಮೇಲೆ ಕವನ ಬರಿಯೋದು , ಮತ್ತೆ ಅವಳ ಆ ಆಟನಾ ನೋಡೋದು ಎಷ್ಟರ ಮಟ್ಟಿಗೆ ಸರಿ ಅಂತ ನಾನು ಯೋಚನೆ ಮಾಡಲೇ ಇಲ್ಲ . ನನಗೆ ಅದೇನು ಹಂತಾ ತಪ್ಪು ಅಂತಾ ನು ಅನ್ನಿಸಲಿಲ್ಲ.

ಕವನ ಬರೀತಾ ಬರೀತಾ, ಅವಳನ್ನ ನೋಡ್ತಾ ನೋಡ್ತಾ ಇದ್ದಾಗ ಅವಳಿಗೆ ಗೊತ್ತಾಗಿ ಪಾಪ ಸುಮ್ಮನಾಗಿ ಬಿಟ್ಟಳು , ನನಗೆ ಸ್ವಲ್ಪ ಬೇಜಾರ್ ಆಯ್ತು , ನಾನು ಒಂದು smile ಕೊಟ್ಟೆ ಅವಳಿಗೆ ಕೋಪ ಬಂತೋ ಏನೋ ಆಕೆ ಬೇರೆ ಕಡೆ ತಿರುಗಿ ಬಿಟ್ಲು . ಒಂದೆರಡು ನಿಮಿಷ , ಮಳೆ ಸ್ವಲ್ಪ ಜೋರ್ ಆಯ್ತು ಅವಳ ಮನಸ್ಸು ಕೇಳಲಿಲ್ಲ ಮತ್ತೆ ಆಟವಾಡೋದನ್ನ ಶುರು ಮಾಡಿದ್ಲು , ನನಗೆ ಮತ್ತೆ ೪ – ೫ ಸಾಲುಗಳನ್ನ ಬರಿಯೋಕೆ ಅವಕಾಶ ಮಾಡಿಕೊಟ್ಟಳು.


ಹನಿ ನೀರಿಗೆ ಗೆಳತಿ
ನೀ ಕೈ ಆಡಿಸುತಿರಲು ,
ದೂರದಿ ನಿಂತು ಕುತೂಹಲದಿ,
ನಾ ಅದ ನೋಡುತಿರಲು,
ಕಂಗಳಿವು ಕೇಳದೆ ನೋಡಲೆಂದು,
ಸನೀಹಕೆ ನಾ ಬರಲು,
ಮನವಿದು ಕೇಳದೆ ಕವಿಯಾಯಿತು,
ಕ್ಷಣ ಮಾತ್ರದಿ ನಿನ್ನಾ ನೋಡುತಿರಲು.


ತುಂತುರು ಮಳೆ ಹನಿಯು ನಿನ್ನಾ
ರೆಪ್ಪೆಯಾ ಸೋಕುತಿರಲು,
ಆ ಸೊಂಪಾದ ತಂಗಾಳಿಗೆ ನೀ,
ಮುಖ ಮಾಡಿ ಕಣ್ಮುಚ್ಚುತಿರಲು,
ಮನವಿದು ಬರೆಯುತಿಹುದು,
ಈ ಪದ ಸಾಲುಗಳನು.


ಕಾರ್ಮೋಡ ಕವಿದರೂ ಚಂದಿರ
ಭಾಸವಾದಂತೆ ನಿನ್ನಾ ಮೊಗವಿದು,
ಮಿನುಗುತಲಿಹುದು,
ಮಂದಹಾಸವ ಬೀರುತಲಿಹುದು,
ಈ ಕವಿಯ ಮನದಲಿ.


ಕ್ಷಣ ಮಾತ್ರದಿ ನೀ ಎನ್ನ ನೋಡಿ
ಸುಮ್ಮನಾಗುತಲಿ
ಮನವಿದು ಕುಸಿಯುತಿಹುದು
ಕಳೆಯುತಿಹುದು
ನೀ ಏತಕೆ ನಿಲ್ಲುತಿಹೆ ಆಡಲು
ಈ ಮುಸ್ಸಂಜೆ ಮಳೆಯಲಿ
ಮನವಿದು ಕಾಯುತಿಹುದು ನೋಡಲು
ನಿನ್ನನು ಜೋಡಿಸಲು ಪದಗಳನು


ಮತ್ತೆ ನೀ ನಗುತಲಿ ಮಳೆಯಲಿ
ಇಳಿಯಲು, ಕುಣಿಯಲು
ಕಳೆ ಮರಳಿತು ಈ ಮುಸ್ಸಂಜೆಯ
ಆವರಣಕೆ ಚಂದಿರನು ನಾಚುವಂತೆ
ನಗೆ ಬೀರಿತು ಕುಸಿದ
ಈ ಮನಕೆ
ಕುನಿಯುತಿಹುದು ಮನವಿದು
ಮಾತನಾಡಲು ನಿನ್ನೊಡೆ ಬಯಸುತಲಿ

Advertisements

7 Comments

 1. Chethan said,

  Chennagidyappa nim hudgi kavana … 🙂 🙂 phone number iskonda…..???

 2. Sunil said,

  sadu really its superb re….. I think u r junior jayanth kaykini….

 3. Nanda said,

  really superb kano… mast aiti… keep rocking…. 🙂

 4. shridevi said,

  It was mindblowing….

 5. shweta said,

  good one….. 🙂

 6. Rajeshwari said,

  awesom..

 7. kavita said,

  its superb..superb..superb…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: