ಮಗು

March 21, 2010 at 10:56 AM (ಸದಾ ಕವಿಯಾದಾಗ?)

ಯುಗಾದಿ ಹಬ್ಬಕ್ಕೆ ಊರಿಗೆ ಹೋದಾಗ ನನ್ನ ಅಕ್ಕನ ಮಕ್ಕಳು ನನ್ನ ಜೊತೆ ಮಾತಾಡ್ತಾ ಮಾತಾಡ್ತಾ ನನಗೆ ಒಳ್ಳೆ time ಪಾಸು ಮಾಡಿದ್ರು, ಒಂದು ಚಿಕ್ಕ ಪಾಪು ಇದೆ ನಮ್ಮ ಅಕ್ಕಾಗೆ , ಹೆಸರು ಸ್ಫೂರ್ತಿ , ಬಹಳ ಮುದ್ದಾಗಿದೆ , ಹಾ photo  ಹಾಕಿದಿನಿ ನೋಡಿ , ಅದನ್ನ ನೋಡ್ತಾ ನೋಡ್ತಾ , ಅದು ನಗೋವಾಗ , ತೊದಲು ತೊದಲು ಮಾತಾಡೋವಾಗ , ನನಗೆ ಏನ್ ಅನಸ್ತಿತ್ತು ಅಂದರೆ , ಮಕ್ಕಳು ಏನ್ think  ಮಾಡ್ತಾವೆ ? ಯಾಕೆ ನಗ್ತಾವೆ? ಅವುಗಳಿಗೆ ಏನ್ ಅರ್ಥ ಆಗುತ್ತೆ ? Science  ಏನೆಲ್ಲಾ ಸಾಹಸ ಮಾಡಿದ್ರು ಮಕ್ಕಳ ಮನಸಲ್ಲಿ ಏನ್ ಇರುತ್ತೆ ಅಂತ ಅರಿಯೋಕೆ ಸಾದ್ಯಾ ಆಗ್ಲೇ ಇಲ್ಲ. ಅವಾಗ ನನಗೆ ಒಂದು ಕವನ ಬರೀಬೇಕು ಅನಸ್ತು .

ಶಶಿಯಂತಹ  ಮುಗುದ  ಮೊಗದೊಳು ,
ನನ್ನಾ ದೃಷ್ಟಿಯ ಕದಿವ  ನಿನ್ನಾ  ಹೊಳಪಿನ  ಕಂಗಳಲಿ ,
ನೇರ  ದಿಟ್ಟ  ದೃಷ್ಟಿಯ  ನಿನಿತ್ತು ,
ಎಲೆ  ಕೂಸೇ  ನೀ  ಏನನು  ನೋಡುತಿಹೆ ,
ನಾ  ಅರಿಯಲಾರೆ .

ಸ್ಫೂರ್ತಿ

ಸ್ಫೂರ್ತಿ

ಹಾಲ್ಗೆನ್ನೆಯಲ್ಲೊಂದು   ಕಿರು  ನಗೆಯ ನೀ ಬೀರಿ ,
ನಾನಾಡುವ ಮಾತುಗಳ  ನೀ  ಆಲಿಸಿ ,
ಎಲ್ಲವು  ತಿಳಿದಂತೆ  ನೀ  ನಟಿಸಿ ,
ಎಲೆ  ಕೂಸೇ  ನೀ  ಏತಕೆ  ನಗುತಿಹೆ ,
ನಾ  ಅರಿಯಲಾರೆ .

ನಿಧಿ

ನಿಧಿ

ನಿನ್ನಾ  ಕಂಠದಿ  ಆಡಿದ  ತೊದಲು  ಸ್ವರಗಳಿಂದ ,
ನಿನ್ನಾ   ಮನಸಾ  ನೀ  ಬಿಚ್ಚಿಟ್ಟು ,
ನನ್ನಾ  ಮನಸಾ  ನೀ  ಸೆಳೆದು ,
ಎಲೆ  ಕೂಸೇ  ನೀ  ಏನನು  ಹೇಳುತಿಹೆ
ನಾ  ಅರಿಯಲಾರೆ .

ನಿಧಿ

ನಿಧಿ

ಸೊಂಪಾದ ನಿದ್ರಾಲೋಕದಲೂ ನೀ ತುಸು ನಕ್ಕು  ,
ಕಣ್ತುಂಬಾ ಹೆಣೆದ ಕನಸ ನೋಡಿದಂತೆ ,
ಕೈ ಬೆರಳನು ಕೂದಲಲಿ ಆಡಿಸಿ ,
ಎಲೆ ಕೂಸೇ ನೀ ಏನನು ಕಾಣುತಿಹೆ
ನಾ ಅರಿಯಲಾರೆ.

cute-baby-girl-sleeping

cute-baby-girl-sleeping

Last photo I got in net. Very cute Don’t know its name :-).

Advertisements

Permalink 15 Comments