ಬದುಕು ಬಂಡಿಯ ನೀ ಓಡಿಸಿ

February 22, 2010 at 2:21 PM (ಸದಾ ಕವಿಯಾದಾಗ?)

ಈ ಕವನ ಬರೀಬೇಕು ಅಂತ ಅನಸಿದ್ದು ನಾನು ಮತ್ತು ರಾಜೇಶ trekking  ಹೋದಾಗ , trekking  start  ಮಾಡೋ ಸ್ಥಳದಿಂದಲೇ ಆ ಮಂಜಿನ ಓಡಾಟ , ಹಕ್ಕಿಗಳ ಚಿಲಿಪಿಲಿ ನಾದ , ದಟ್ಟ ಅರಣ್ಯ , ಅದರೊಳಗೆ ನಾನು ಮತ್ತೆ ರಾಜೇಶ ,ಇವನ್ನೆಲ್ಲ ನೋಡಿದ ಮೇಲೆ ನನಗೆ ಏನೋ ಸಂತೋಷ ಆಗ್ತಾ ಇತ್ತು, ಮತ್ತೆ ಈ ನನ್ನ ತಲೆ ಏನೋ ವಿಚಾರ ಮಾಡ್ತಾ ಇತ್ತು.  ಏನಪ್ಪಾ ಅಂದರೆ , ಈ ಪ್ರಕೃತಿ ಅನ್ನೋದು ಹೇಗೆ ಎಲ್ಲ ಪ್ರಾಣಿ ಪಕ್ಷಿಗಳಿಗೂ ಎಲ್ಲ ಅಗತ್ಯ ಅನಕೂಲತೆಯನ್ನ ಮಾಡಿಕೊಟ್ಟಿದೆ ಅಂತ , ಎಲ್ಲ ಜೀವಿಗಳು ತಮ್ಮದೇ ಆದ ವಿಶಿಷ್ಟತೆಯನ್ನ ಪಡ್ಕೊಂಡಿವೆ, ಪಕ್ಷಿಗಳಿಗೆ ಸೊಗಸಾದ ಕಂಠ, ಪ್ರಾಣಿಗಳಿಗೆ ಎಲ್ಲರನ್ನು ಸೆಳೆಯೋ ಅಂತಹ ಬಣ್ಣ , ಮುಗ್ದತೆ , ಕ್ರೌರ್ಯತೆ , ಮತ್ತೆ ಎಲ್ಲರನ್ನು ಮೀರಿಸುವ ಈ ಮನುಷ್ಯ ಪ್ರಾಣಿಗೆ ಅಮೋಘವಾದ ಬುದ್ಧಿಶಕ್ತಿಯನ್ನ ಕೊಟ್ಟಿದ್ದು ಈ ಪ್ರಕೃತಿ, ಒಟ್ಟಿನಲ್ಲಿ ಪ್ರಕೃತಿ ಮಾತೆ ಎಲ್ಲರನ್ನ ಸರಿಯಾಗಿ ಕರೆದೊಯ್ತಿದಾಳೆ. ಅದಕೆ ಬದುಕೆಂಬ ಈ ಬಂಡಿ ಹೀಗೆ ಸಾಗ್ತಾ ಇದೆ ಅಂತ ವಿಚಾರ ಮಾಡ್ತಾ ಇದ್ದಾಗ ಪದಗಳು ತನ್ನಿಂತಾನೆ ಹೊರಬಂದವು.

ಹಸಿರು ಸೀರೆಯ ನೀ ಧರಿಸಿ
ನೀಲ ನಭವ ನೀ ಮುಡಿಸಿ

ಹೊನಲು ಬೆಳಕೆಂದಾಡಿಸಿ
ಬದುಕು ಬಂಡಿಯ ನೀ ಓ
ಡಿಸಿ

ಜೀವ ಜಂತುಗಳ ನಿನ್ನೊಳಡಗಿಸಿ
ಭೀತಿ ಭಯವೆಂಬುದನ್ನಿಟ್ಟಿಸಿ

ಪ್ರೀತಿ ಪ್ರೇಮವೆಂಬುದನ್ ಬೆರೆಸಿ
ಬದುಕು ಬಂಡಿಯ ನೀ ಓಡಿ
ಸಿ

ಅರುಣ ಶಶಿಯರನ್ ನೀ ಬಿಂಬಿಸಿ
ಗಾಳಿ ಮಳೆಯ ನೀ ಇಳಿಸಿ

ಹುಚ್ಚು ಮನವ ನೀ ತಣಿಸಿ
ಬದುಕು ಬಂಡಿಯ ನೀ ಓಡಿಸಿ

ಹಕ್ಕಿಗಳ ಕಂಠದಿ ನೀ ಹಾಡಿಸಿ
ಕಲ್ಲು ಮುಳ್ಳಲಿ ಜೀವ ಜಲವ ನೀ
ಹರಿಸಿ
ನೀಲ ನಯನಗಳಿಗಿದನ್ ತೋರಿಸಿ , ತೃಪ್
ತಿಸಿ
ಬದುಕು ಬಂಡಿಯ ನೀ ಓಡಿ
ಸಿ

ಇಂದು, ನಿನ್ನೀ ಸೌಂದರ್ಯವ ಆನಂದಿಸಿ
ಇದೋ ಬರೆದಿಹೆ ಕವನವ ನಿನ್ನಲಿ ವಂದಿಸಿ

ಅದೆಷ್ಟೋ ಕವಿಗಳ ನೀ ಹುಟ್ಟಿಸಿ
ಬದುಕು ಬಂಡಿಯ ನೀ ಓಡಿಸಿ.

Advertisements

Permalink 10 Comments

ಓ ಮನವೇ

February 15, 2010 at 9:35 AM (ಸದಾ ಕವಿಯಾದಾಗ?)

ಹಸಿರೆಲೆಯ ಮೇಲಿನ
ಹನಿವ ನೀರಂತೆ
ಸಹರಾದಲ್ಲಿನ ಮರಳಿನಿಬ್ಬರದಂತೆ
ನನ್ನಾಕೆಯ ಅಂಗೈಯೋಳಿನ
ಪಾದರಸದಂತೆ
ಓ ಮನವೇ ನೀ ಏತಕೆ ಜಾರುವೆ
ಈ ಎನ್ನ ಮನಗೋಕುಲದಿ


ಬ್ರಹ್ಮಾಂಡದಳಿವು ಉಳಿವಿನ
ಆ ಗುಟ್ಟು ಹಿಡಿಯಲಾದಿತೇ
ಸಾಗರದಾಳದಿ ಎಸೆದ

ಆ ಮುತ್ತು ಹುಡುಕಲಾದಿತೆ
ಓ ಮನವೇ ನೀ ಎಲ್ಲಿ ಏನು

ಎಂತಾ ಎಂದರಿಯಲಾದಿತೆೇ

ಓ ಮನವೇ ನೀ ಮಂಗನಂತಾಡದಿರು
ತುಸು ಹೊತ್ತು ನನ್ನೋಳ ಹುದುಗಿರು

ನನ್ನ ಮನಗೊಕುಲದಿ ಸದಾ ಆನಂದವಾಗಿರು

Permalink 1 Comment

~ ಕನಸಲ್ಲೊಂದು ಕನಸು ~

February 14, 2010 at 3:44 PM (ಸದಾ ಕವಿಯಾದಾಗ?)

ಕನಸಿನಲ್ಲಿ ನೀ ಕನಸಾಗಿ ಬಂದು
ನೀ ನಿಂದು ಏನೆಂದು ಕೇಳಿದೊಡೆ
ಬೆರಗಾಗಿರುವದು ಬಡಪಾಯಿ

ಹೃದಯವಿದು ನಿನ್ನ ನೆರನೋಟಕೆ

ಕನಸಿನಾಚೆಯೂ ಓ ಗೊಡುತಿಹೆ
ಆ ನಿನ್ನಿಂಪಾದ ಮಾತಿಗೆ
ಎಲ್ಲಿರುವೆ ಗೆಳತಿ ನನ್ನೆದೆಯ

ತೆರೆಯೋಳಿನುಕಿ ನೋಡು
ಆ ಕನಸಿನ ಕನಸನು ಹೂವಿ
ನಲ್ಲಿತ್ತಂತೆ ಸದಾ
ಕಾದಿಹುದು ಈ ಮನ

ಬಾಳಿನ ಹೊನಲಾಗಿ ಬಾ

ಕನಸಿನ ಕನಸೋಳು ಮಬ್ಬು
ಮಬ್ಬಾಗಿ ಕಂಡಿಹುದು ನಿನ್ನಾಮೊಗವು
ಅರಸುತಿಹುದೆನ್ನ ನೀಲ

ನೆತ್ರಗಳಿವು
ಎಲ್ಲಿರುವೆ ಗೆಳತಿ ಬಂದೊಂದುಬಾರಿ

ನಗುವ ಚೆಲ್ಲು ಭಾರದಿಕಂಗಳಿಗೆ

ನೀ ಬಂದು ನನ್ನೆದುರು ನಿಂದೋಡೆ
ಮನವಿದು ಸದಾ ಆನಂದಾ ಸದಾ ಆನ
ಂದಾ

Permalink 8 Comments

Save me…

February 8, 2010 at 12:37 PM (Non Technical)

ಅದೊಂದು ಟ್ಟವಾದ ಕಾಡು , ಮಗುವೊಂದು ಬಿಕ್ಕಿ ಬಿಕ್ಕಿ ಅಳುತ್ತಿದೆ , ಕಾಪಾಡಿ ಕಾಪಾಡಿ ಎಂದು ಕೂಗ್ತಾ ಇದೆ , ಆದ್ರೆ ಯಾರೂ ಅದನ್ನಾ ರಕ್ಷಿಸೋರಿಲ್ಲ, ಬದಲಾಗಿ ಅದನ್ನಾ ತಿಂದು ಹಾಕೋಕೆ ಸಾಕಷ್ಟು ಕ್ರೂರ , ನೀಚ ಪ್ರಾಣಿಗಳು ಸುತ್ತುವರೆದು ನಿಂತಿವೆ. ಉಳಿದವರೆಲ್ಲರೂ ಕೇಳಿಯೂ ಕೇಳದಂತೆ ಸುಮ್ಮನಿದ್ದಾರೆ. ಮಗುವೊಂದು ಅಳುತ್ತಿರುವಾಗ ನಮ್ಮ ನಿಮ್ಮೆಲ್ಲರ ಕರಳು ಚುರುಕ್ ಅಂತ ಅನ್ನೋದಿಲ್ವಾ?. ಯಾರೇ ಆಗಲಿ ಓಡಿ ಹೋಗಿ ಮಗುವನ್ನು ತೊಡೆಯಲ್ಲಿ ಕೂರಿಸಿ, ಏಕೆ ಪುಟ್ಟಾ ಏನಾಯ್ತು? chocolate ಬೇಕಾ? ಅಮ್ಮ ಬಂತು ನೋಡು ಅಂತಾ ಸಂತೈಸಿ ಮುದ್ದಾಡ್ತಿವಿ. ಆದರೆ ಪಾಪಾ ಈ ಮಗುವಿಗೆ ಅಮ್ಮ ಬಂದರೂ ತನ್ನ ಮಗುವನ್ನು ಕಾಪಾಡೋಕಾಗೋಲ್ಲಾ, ಏನು ಮಾಡೋದು ಪರಿಸ್ಥಿತಿನೇ ಹಾಗಿದೆ. ಸ್ವಲ್ಪ ನಿಮ್ಮ ಕಣ್ಮುಚ್ಚಿ ತುಸು ಹೊತ್ತು ಆ ಮಗುವಿನ ಬಗ್ಗೆ ಯೋಚಿಸಿ, ಟ್ಟ ಅರಣ್ಯದಲ್ಲಿ ಮಗುವೊಂದೇ ! ನನ್ನ ಕಂಗಳು ಕಣ್ಣೀರ ಹನಿಗಳಿಂದ ತುಂಬ್ತಾ ಇವೆ . ಮಗು ಅತ್ತಾಗಾ ತಾಯಿ ಮಡಿಲಿಗೆ ಹೋದಾಕ್ಷಣ ಸುಮ್ಮನಾಗಿ , ಅದರ ಶಶಿಯಂತಹ ಮೊಗದಲ್ಲಿ ಹಾಲಿನಂತಹ ನಗು ತಾಂಡವಾಡುತ್ತೆ. ಆ ತಾಯಿಯ ಪ್ರೀತಿ , ವಾತ್ಸಲ್ಯ, ಆಹಾ ದೇವರು ಈ ಎಲ್ಲ ಪ್ರಾಣಿ ಪಕ್ಷಿಗಳಿಗಿತ್ತ ಅದ್ಭುತ ಕೊಡುಗೆ.

ಆದರೆ ಈ ಮಗು ಆ ಹೊತ್ತಿಗೆ ತಾಯಿಯ ಆ ವಾತ್ಸಲ್ಯದಿಂದ ಬಹುಷಃ ಶಾಶ್ವತವಾಗಿಯೇ ದೂರ ಆಗ್ತಿದೆಯೋ ಏನೋ ಅಂತಾ ನನ್ನ ಮನಸ್ಸು ದುಃಖಿಸುತ್ತಿದೆ. ಇದರಬಗ್ಗೆ ಕೇಳ್ತಾ ಇದ್ದ್ರೆ ನಿಮಗೂ  ಬೇಸರವಾಗೊಲ್ವೆ?


Save me

Save me

ಸ್ನೇಹಿತರೆ ನಾನು ಮಾತಾಡ್ತಾ ಇರೋದು ನಮ್ಮ ರಾಷ್ಟ್ರ ಪ್ರಾಣಿ ಹುಲಿಗಳ ಬಗ್ಗೆ. ಹೌದು ಇಲ್ಲಿ ಮಗು ಅಂದ್ರೆ ಹುಲಿ ( ರೂಪಕ ಅಲಂಕಾರ ), ನೀಚ ಪ್ರಾಣಿ ಅಂದ್ರೆ ಮನುಷ್ಯ. ಈ ನೀಚ ತನ್ನ ಸ್ವಾರ್ಥಕ್ಕಾಗಿ ಇಂತಹಾ ಅದೆಷ್ಟೋ ಹುಲಿಗಳು ಮತ್ತು ಹುಲಿಮರಿಗಳನ್ನಾ ಕೊಂದು ಹಾಕ್ತಿದ್ದಾನೆ. ಅವುಗಳಿಗೂ ಬದುಕಬೇಕೆಂಬ ಆಸೆ ಇರುತ್ತೆ , ತಾಯಿಯ ಪ್ರೀತಿ , ವಾತ್ಸಲ್ಯ ಇವುಗಳೆಲ್ಲಾ ನಮಗಷ್ಟೇ ಮೀಸಲು ಅಂತಾ ಅನ್ಕೋಬೇಡಿ. ಆ ದಟ್ಟ ಅರಣ್ಯದಲ್ಲಿ ಸ್ವಚ್ಛಂದವಾಗಿ ಬದುಕಬೇಕೆಂದರೆ ಅದೆಷ್ಟೋ ಕಠಿಣ ದಿನಗಳನ್ನ ಎದುರು ನೋಡಬೇಕೋ ಕಾಡಿನ ಆ ಮುಗ್ಧ ಪ್ರಾಣಿಗಳು. ಬೇಸರ ಆಗೋಲ್ವೇ ?. ಇತ್ತೀಚಿಗೆ ಮಾಡಿದ ಹುಲಿಗಳ ಗಣತಿ ಪ್ರಕಾರ ನಮ್ಮ ದೇಶದಲ್ಲಿ ಕೇವಲ ೧೪೦೦ ಹುಲಿಗಳು ಬದುಕುಳಿದಿವೆ ಎಂದು ಅಂದಾಜಿಸಲಾಗಿದೆ. ನೋಡಿ ಅದು ಕೂಡ ಅಂದಾಜು. ಇನ್ನು ಸರಿಯಾದ ಅಂಕಿ ಅಂಶ ಸಿಕ್ಕರೆ ಅದಕ್ಕಿಂತಾ ಕಡಿಮೇನು ಇರಬಹುದು .

ನಮ್ಮಿಂದೇನು ಮಾಡೋಕಾಗುತ್ತೆ? ಈ ಪ್ರಶ್ನೆಗೆ ನನ್ನ ಹತ್ತಿರ ಉತ್ತರವಿಲ್ಲಾ. ಕೇವಲ ನಿಮ್ಮ ಗಮನಕ್ಕೆ ತರುವ ಕೆಲಸವನ್ನ ಮಾಡ್ತಿದ್ದೇನೆ. ನಾವು ನೀವು ಸ್ವಲ್ಪ ಇದರ ಬಗ್ಗೆ ಯೋಚಿಸಿದರೆ ನಾವೇನು ಮಾಡಬಹುದು? ಅಂತಾ ತಿಳಿಬಹುದು.

” ನನ್ನ ಪ್ರಶ್ನೆಗೆ ಉತ್ತರವಿದೆಯೇ ? “

“PLEASE SAVE OUR TIGERS “

Permalink 5 Comments